ಬೆಂಗಳೂರು, ಸೆಪ್ಟೆಂಬರ್ 03, 2025: ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಜ್ಯೋತಿ ಪ್ರಕಾಶ್ ಮೆಸ್ತ ಅವರ ಪುತ್ರ ಅಮಿತ್ ಪಿ. ಮೆಸ್ತ, ಆಗಸ್ಟ್ 24, 2025ರಂದು ಬೆಂಗಳೂರಿನಲ್ಲಿ ನಡೆದ Mr. Karnataka 2025 ದೇಹದಾರ್ಢ್ಯ (ಬಾಡಿಬಿಲ್ಡಿಂಗ್) ಸ್ಪರ್ಧೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಮೆನ್ಸ್ ಫಿಸಿಕ್ ಮತ್ತು ಕ್ಲಾಸಿಕ್ ಫಿಸಿಕ್ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಅಮಿತ್, ಬಾಡಿಬಿಲ್ಡಿಂಗ್ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಇದೊಂದೇ ಅಲ್ಲ, ಕ್ಲಾಸಿಕ್ ಫಿಸಿಕ್ ವಿಭಾಗದಲ್ಲಿ ಅಮಿತ್ ಅವರು ‘ಚಾಂಪಿಯನ್ಸ್ ಆಫ್ ಚಾಂಪಿಯನ್’ ಎಂಬ ಪ್ರತಿಷ್ಠಿತ ಗೌರವವನ್ನು ಗಳಿಸಿ, Mr. Karnataka 2025 ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಘನ ಸಾಧನೆಯು ಕರಾವಳಿ ಕರ್ನಾಟಕದ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದು, ದೇಹದಾಢ್ಯ ಕ್ಷೇತ್ರದಲ್ಲಿ ಶಿಸ್ತು ಮತ್ತು ಸಮರ್ಪಣೆಯ ಮಹತ್ವವನ್ನು ಎತ್ತಿಹಿಡಿದಿದೆ.