ಅಯೋಧ್ಯೆ ಬೆನ್ನಲ್ಲೇ ಬದರಿನಾಥದಲ್ಲೂ ಕಾಣಿಕೆ ಹಣ ಲೂಟಿ ಆರೋಪ: ತನಿಖೆಗೆ ಆದೇಶಿಸಿದ ದೇವಸ್ಥಾನ ಸಮಿತಿ
ಅಯೋಧ್ಯೆಯ ಬಳಿಕ ಬದರಿನಾಥ ದೇವಸ್ಥಾನದಲ್ಲೂ ಕಾಣಿಕೆ ಹಣ ಕಳ್ಳತನವಾಗಿರುವ ಆರೋಪ ಕೇಳಿಬಂದಿದ್ದು, ಭೈರವ್ ಸೇನಾ ಸಂಘಟನೆಯ ದೂರಿನ ಮೇರೆಗೆ ಬದರಿ-ಕೇದರ ದೇವಸ್ಥಾನ ಸಮಿತಿಯು ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
