ಬಾಳೆಬರೆ ಘಾಟಿಯಲ್ಲಿ ಭೂಕುಸಿತ: ಎಲ್ಲ ಮಾದರಿಯ ವಾಹನ ಸಂಚಾರ ತಾತ್ಕಾಲಿಕ ನಿಷೇಧ; ಜಿಲ್ಲಾಧಿಕಾರಿ ಆದೇಶ
ರಸ್ತೆ ಅಗಲೀಕರಣದ ವೇಳೆ ಭೂಕುಸಿತ ಉಂಟಾಗಿ ಬಾಳೆಬರೆ ಘಾಟಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸಂಚಾರ ನಿಷೇಧ ಹೇರಿದ್ದು, ಕೊಲ್ಲೂರು ಅಥವಾ ಹೊನ್ನಾವರ ಮಾರ್ಗವಾಗಿ ಸಂಚರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.

