ಬೆಂಗಳೂರು, ಆಗಸ್ಟ್ 22, 2025: ನಮ್ಮ ನಾಡ ಒಕ್ಕೂಟದ ಬೆಂಗಳೂರು ಘಟಕದ ತಾತ್ಕಾಲಿಕ ಸಮಿತಿಯನ್ನು ಆಗಸ್ಟ್ 20, 2025ರಂದು ದಾರುಸ್ಸಲಾಮ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ಸಮುದಾಯದ ಪ್ರಮುಖರೊಂದಿಗೆ ಪ್ರಸಕ್ತ ವಿದ್ಯಮಾನಗಳ ಕುರಿತು ವಿಚಾರ ವಿನಿಮಯ ನಡೆಸಿದ ಈ ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷ ಮುಹಮ್ಮದ್ ಸಲೀಮ್ ಮೂಡುಬಿದ್ರೆ ವಹಿಸಿದ್ದರು.
ಸಭೆಯನ್ನು ಮೌಲಾನಾ ಝಮೀರ್ ಅಹ್ಮದ್ ರಶಾದಿಯವರ ಕುರ್‌ಆನ್ ಪಠಣದೊಂದಿಗೆ ಆರಂಭಿಸಲಾಯಿತು. ಎನ್‌ಎನ್‌ಒ ಬೆಂಗಳೂರು ಸಂಯೋಜಕ ಜನಾಬ್ ಅಝೀಝ್ ಸಭಿಕರನ್ನು ಸ್ವಾಗತಿಸಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಹಮ್ಮದ್ ಸಲೀಮ್, ಸಮುದಾಯದ ಐಕ್ಯತೆಯ ಅಗತ್ಯತೆಯನ್ನು ಒತ್ತಿ, ಸಾಮಾಜಿಕ ಕಾರ್ಯಕರ್ತರು ಮತ್ತು ನಾಯಕರು ಒಕ್ಕೂಟದೊಂದಿಗೆ ಕೈಜೋಡಿಸಿ, ಸವಾಲುಗಳನ್ನು ಜಯಿಸಲು ಸಹಕರಿಸಬೇಕೆಂದು ಕರೆ ನೀಡಿದರು.
ಜನಾಬ್ ತೌಸೀಫ್, ಸಮುದಾಯದ ಕೋಟ್ಯಂತರ ರೂಪಾಯಿಗಳನ್ನು ಕಾರ್ಯತಂತ್ರದಿಂದ ಉಳಿಸಿದ್ದನ್ನು ವಿವರಿಸಿ, ಈ ಮಾದರಿಯನ್ನು ರಾಜ್ಯದ ಇತರ ತಾಲೂಕುಗಳಿಗೆ ವಿಸ್ತರಿಸಲು ಸಲಹೆ ನೀಡಿದರು. ಜನಾಬ್ ಹಾರಿಸ್ ಸಾಹೇಬ್, ಒಕ್ಕೂಟದ ಸಮುದಾಯ ಕೇಂದ್ರದ ಪರಿಕಲ್ಪನೆಯನ್ನು ಬೆಂಬಲಿಸುವ ಭರವಸೆ ನೀಡಿದರು. ಜನಾಬ್ ಫೌಝಾನ್, ಸಂಘ ಸಂಸ್ಥೆಗಳ ಸಹಕಾರದಿಂದ ಕಾರ್ಯನಿರ್ವಹಣೆಗೆ ಒತ್ತಾಯಿಸಿದರು. ಜನಾಬ್ ತನ್ವೀರ್, ಎನ್‌ಎನ್‌ಒ ಬೆಂಗಳೂರಿಗೆ ಕಚೇರಿ ಸ್ಥಳ ನೀಡುವ ಭರವಸೆ ನೀಡಿದರು.
ಸಭೆಯಲ್ಲಿ ಕೋಶಾಧಿಕಾರಿ ಪೀರು ಸಾಹೇಬ್ ಉಡುಪಿ, ಕೇಂದ್ರ ಸಮಿತಿ ಸದಸ್ಯರಾದ ಶಬ್ಬೀರ್ ಕಾರ್ಕಳ, ಮುಷ್ತಾಕ್ ಬೆಳ್ವೆ, ಉಡುಪಿ ಜಿಲ್ಲಾ ಸಮಿತಿಯ ಕೋಶಾಧಿಕಾರಿ ಯಾಹ್ಯಾ ನಖ್ವಾ, ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಹಾರೂನ್ ರಶೀದ್, ನಝೀರ್ ನೇಜಾರ್, ಅಬ್ದುಲ್ ಖಾದರ್ ಮೂಡುಗೋಪಾಡಿ, ನಿಹಾರ್ ಕುಂದಾಪುರ, ರಶೀದ್ ಕಾಪು, ಆಸಿಫ್ ಬೆಳ್ವೆ ಮತ್ತು ಇತರರು ಉಪಸ್ಥಿತರಿದ್ದರು.
ತಾತ್ಕಾಲಿಕ ಸಮಿತಿಯ ಸದಸ್ಯರಾಗಿ ಅಬ್ದುಲ್ ಅಝೀಝ್ (ಸಂಯೋಜಕ), ತನ್ವೀರ್ ಅಹ್ಮದ್, ಹಾರಿಸ್ ಸಿದ್ದೀಕ್, ಮುಹಮ್ಮದ್ ವಾಸಿಫ್, ತೌಸೀಫ್, ಬಹಾವುದ್ದೀನ್, ಫೌಝಾನ್, ಫಾರೂಕ್ ಆಜ್ಮಿ, ದಾದಾ ಪೀರ್, ಡಾ. ನಸೀಮ್, ಅಡ್ವೊಕೇಟ್ ಕಲೀಮುಲ್ಲಾ, ಮುಝಫ್ಫರ್, ಅಬ್ದುಲ್ ರಶೀದ್ ಕೋಲಾರ, ಶಫೀವುಲ್ಲಾ ಚಿತ್ರದುರ್ಗ, ಅಬ್ದುಲ್ ಮಜೀದ್, ಮತ್ತು ಇನಾಯತ್ ಆಯ್ಕೆಯಾದರು.