ಭಟ್ಕಳ: ಗೋಗಳ್ಳರ ಭಾರಿ ಹೈಡ್ರಾಮಾ; ಪೊಲೀಸರ ಮೇಲೆ ಹಲ್ಲೆ ನಡೆಸಿ ಐವರು ಆರೋಪಿಗಳು ಎಸ್ಕೇಪ್!
ಭಟ್ಕಳದ ತಲಗೇರಿಯಲ್ಲಿ ಗೋಗಳ್ಳತನಕ್ಕೆ ಯತ್ನಿಸಿದ ಐವರು ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಪೊಲೀಸರು ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಕಾರು, ಬೈಕ್ ಹಾಗೂ ಕಳ್ಳತನವಾಗಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

