ಭಟ್ಕಳ, ಆಗಸ್ಟ್ 30, 2025: ಹೊನ್ನಾವರ ತಾಲೂಕಿನ ಇಡುಗುಂಜಿ ಮೂಲದ ಮಂಜುನಾಥ ಗೌಡ (51) ಎಂಬವರು ನಾಲ್ಕು ದಿನಗಳ ಹಿಂದೆ ಭಟ್ಕಳದಲ್ಲಿ ಮೀನುಗಾರಿಕಾ ಬೋಟಿನಿಂದ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದರು. ಇವರ ಶವ ಇಂದು ಬೆಳಿಗ್ಗೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಿರಿಮಂಜೇಶ್ವರ ಗ್ರಾಮದ ಆಕಳ ಬೈಲು ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಸ್ಥಳೀಯರಾದ ಆನಂದ ದೇವಾಡಿಗ ತೇಲುತ್ತಿದ್ದ ಶವವನ್ನು ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಬೈಂದೂರು ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಂದೂರು ಸರಕಾರಿ ಆಸ್ಪತ್ರೆಯ ಸವಗಾರಕ್ಕೆ ರವಾನಿಸಿದರು. ಶವ ಪತ್ತೆಯಾದ ಸ್ಥಳಕ್ಕೆ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಖಾರ್ವಿ, ಸದಸ್ಯ ಗಣೇಶ್ ಪೂಜಾರಿ ಭೇಟಿ ನೀಡಿದರು. ಶವವನ್ನು ಸಾಗಿಸಲು ಬೈಂದೂರು ಪೊಲೀಸ್ ಠಾಣಾ ಸಿಬ್ಬಂದಿ, ಸಂತೋಷ್ ಖಾರ್ವಿ, ಗಂಗೊಳ್ಳಿ ಆಂಬುಲೆನ್ಸ್‌ನ ಇಬ್ರಾಹಿಂ, ವಿಕಾಸ್ ಮೊಗವೀರ, ಕೆಎನ್‌ಡಿ ಸಿಬ್ಬಂದಿ ಗೋಪಾಲ್ ಕೊಡೇರಿ, ಮತ್ತು ಆನಂದ ದೇವಾಡಿಗ ಸಹಕರಿಸಿದರು.