ಭಟ್ಕಳ ವ್ಯಕ್ತಿಗೆ 6 ತಿಂಗಳ ಗಡಿಪಾರು: ರಾಯಚೂರಿಗೆ ಸ್ಥಳಾಂತರ ಆದೇಶ
ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯಡಿ 7 ಪ್ರಕರಣಗಳನ್ನು ಎದುರಿಸುತ್ತಿರುವ ಭಟ್ಕಳದ ಇಸ್ಮಾಯಿಲ್ ಹವ್ವಾ (46) ಎಂಬಾತನನ್ನು ಶಾಂತಿ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.

