ಭಟ್ಕಳ, ಸೆಪ್ಟೆಂಬರ್ 17, 2025: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯ ಮುಗ್ಗುಂ ಕಾಲೋನಿ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ವಧೆ ಮಾಡಿ ಬಿಡಿ ಬಾಗಗಳನ್ನು ಬಿಸಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕಾರ್ಯಾಚರಣೆಯು ಪೊಲೀಸ್ ಇಲಾಖೆಯ ತ್ವರಿತತೆಯನ್ನು ತೋರಿಸುತ್ತದೆ.
ಸೆಪ್ಟೆಂಬರ್ 11, 2025ರ ಸಂಜೆ 4:00 ಗಂಟೆ ಸಮಯದಲ್ಲಿ, ಭಟ್ಕಳದ ಮುಗ್ಗುಂ ಕಾಲೋನಿ ಗುಡ್ಡೆಯಲ್ಲಿ (ಬೆಳೆ ಫಾರೆಸ್ಟ್ ಸರ್ವೆ ನಂ. 74, ಅರಣ್ಯ ಇಲಾಖೆಗೆ ಸೇರಿದ ಜಾಗ) ಆರೋಪಿಗಳು ಅಕ್ರಮ ಪ್ರವೇಶ ಮಾಡಿ ಜಾನುವಾರುಗಳನ್ನು ವಧೆ ಮಾಡಿ, ಚರ್ಮ, ಎಲುಬು, ಮತ್ತು ಇತರ ಬಿಡಿ ಬಾಗಗಳನ್ನು ಬಿಸಾಡಿದ್ದಾರೆ ಎಂದು ಉಪವಲಯ ಅರಣ್ಯಾಧಿಕಾರಿ ಮಾರುತಿ (ತಂದೆ: ಗಣಪತಿ ಸೊರಗಾಂವಿ, ಫಾರೆಸ್ಟ್ ಕ್ವಾರ್ಟರ್ಸ್, ಭಟ್ಕಳ) ದೂರು ನೀಡಿದ್ದಾರೆ. ಈ ಘಟನೆಯ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 105/2025ರಡಿಯಲ್ಲಿ ಕಲಂ 4, 12 ಕರ್ನಾಟಕ ಪ್ರಿವೆನ್ಷನ್ ಆಫ್ ಸ್ಲಾಟರ್ ಅಂಡ್ ಪ್ರಿಜರ್ವೇಷನ್ ಆಫ್ ಕ್ಯಾಟಲ್ ಆಕ್ಟ್-2020 ಮತ್ತು 329(3) BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ತನಿಖೆಯಲ್ಲಿ ಆರೋಪಿಗಳಾದ:
- ಮೊಹಮ್ಮದ್ ಸಮಾನ್ (ತಂದೆ: ಬಿ.ಕೆ. ಅಬುಮೊಹಮ್ಮದ್, ವಯಸ್ಸು: 19, ವಾಸ: ಮುಗ್ಗುಂ ಕಾಲೋನಿ, ಭಟ್ಕಳ)
- ಮೊಹಮ್ಮದ್ ರಾಹೀನ್ (ತಂದೆ: ಮೊಹಮ್ಮದ್ ರಿಜ್ವಾನ್, ವಯಸ್ಸು: 20, ವಾಸ: ಚೌಥನಿ ಮೇನ್ ರೋಡ್, ಭಟ್ಕಳ)
ಗುರುತಿಸಲ್ಪಟ್ಟಿದ್ದಾರೆ. ಸೆಪ್ಟೆಂಬರ್ 17ರಂದು ಇವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆಯು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಕೃಷ್ಣಮೂರ್ತಿ ಜಿ. ಮತ್ತು ಜಗದೀಶ್ ನಾಯ್ಕ, ಪೊಲೀಸ್ ಉಪಾಧಿಕ್ಷಕ ಮಹೇಶ್ ಎಂ.ಕೆ., ಭಟ್ಕಳ ಶಹರ ಪೊಲೀಸ್ ಇನ್‌ಸ್ಪೆಕ್ಟರ್ ದಿವಾಕರ್ ಪಿ.ಎಂ., ನವೀನ್ ನಾಯ್ಕ (ಪಿಎಸ್‌ಐ ಕಾ&ಸು), ತಿಮ್ಮಪ್ಪ ಎಸ್. (ಪಿಎಸ್‌ಐ), ಸಿಬ್ಬಂದಿಯಾದ ದಿನೇಶ್ ನಾಯ್ಕ (ಸಿ.ಹೆಚ್.ಸಿ-1475), ದೇವು ನಾಯ್ಕ (ಸಿ.ಹೆಚ್.ಸಿ-713), ದೀಪಕ್ ನಾಯ್ಕ (ಸಿ.ಹೆಚ್.ಸಿ-860), ವಿನಾಯಕ್ ಪಾಟೀಲ್ (ಸಿ.ಹೆಚ್.ಸಿ-1347), ಕಾಶಿನಾಥ್ ಕೊಟಗೊಣಸಿ (ಸಿ.ಪಿ.ಸಿ 583), ಸುರೇಶ್ ಮರಾಠಿ (ಸಿ.ಪಿ.ಸಿ 1663), ಕಿರಣ್ ಪಾಟೀಲ್ (ಸಿ.ಪಿ.ಸಿ-1772), ರೇವಣಸಿದ್ದಪ್ಪ ಮಾಗಿ (ಸಿ.ಪಿ.ಸಿ 1008), ಮತ್ತು ತಾಂತ್ರಿಕ ವಿಭಾಗದ ಉದಯ್ ಗುನಗಾ, ಬಬನ್ ಕದಂ ಅವರ ನಿರ್ದೇಶನದಂತೆ ನಡೆದಿದೆ.
ಈ ತ್ವರಿತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ಪ್ರಶಂಸಿಸಿ ಅಭಿನಂದಿಸಿದೆ.