ಭಟ್ಕಳ: ಹಳೆ ಬಸ್ ನಿಲ್ದಾಣ ಬಳಿ ಅನಾಥ ಭಿಕ್ಷುಕನ ಸಾವು

ತಾಲೂಕಿನ ಹಳೆ ಬಸ್ ನಿಲ್ದಾಣದ ಸಮೀಪದ ಅಂಗಡಿ ಮುಂಭಾಗದಲ್ಲಿ ಅನಾಥ ಭಿಕ್ಷುಕರೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಶವಗಾರದಲ್ಲಿ ಇಡಲಾಗಿದೆ. ಭಟ್ಕಳ ನಗರ ಪೊಲೀಸ್ ಠಾಣೆ (08385-226333) ಅಥವಾ ಮೊಬೈಲ್ ಸಂಖ್ಯೆ 9480805269ಗೆ ಕರೆಮಾಡಿ ತಿಳಿಸಲು ಕೋರಲಾಗಿದೆ.

ಭಟ್ಕಳ: ಹಳೆ ಬಸ್ ನಿಲ್ದಾಣ ಬಳಿ ಅನಾಥ ಭಿಕ್ಷುಕನ ಸಾವು

ಭಟ್ಕಳ: ತಾಲೂಕಿನ ಹಳೆ ಬಸ್ ನಿಲ್ದಾಣದ ಸಮೀಪದ ಅಂಗಡಿ ಮುಂಭಾಗದಲ್ಲಿ ಅನಾಥ ಭಿಕ್ಷುಕರೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಶವಗಾರದಲ್ಲಿ ಇಡಲಾಗಿದೆ.

ಮೃತನು ಬೆಳಗಾವಿ ಜಿಲ್ಲೆಯ ಅಥಣಿ ಮೂಲದವನಾಗಿರಬಹುದೆಂದು ಶಂಕಿಸಲಾಗುತ್ತಿದ್ದು, ಇನ್ನೂ ಅವರ ವಿವರಗಳು ಪತ್ತೆಯಾಗಿಲ್ಲ.

ಅನಾರೋಗ್ಯದಿಂದ ಬಳಲುತ್ತಿದ್ದ ಆತ ಅಂಗಡಿ ಮುಂಭಾಗದಲ್ಲೇ ಕುಳಿತ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.

ಮೃತನ ಕುಟುಂಬಕ್ಕೆ ಮಾಹಿತಿ ತಲುಪಲು ಸಾರ್ವಜನಿಕರು ಸಹಕರಿಸಬೇಕೆಂದು ಭಟ್ಕಳ ಪೊಲೀಸರು ಮನವಿ ಮಾಡಿದ್ದಾರೆ. ಯಾರಿಗಾದರೂ ಈತನ ಕುರಿತು ಮಾಹಿತಿ ಇದ್ದಲ್ಲಿ ಭಟ್ಕಳ ನಗರ ಪೊಲೀಸ್ ಠಾಣೆ (08385-226333) ಅಥವಾ ಮೊಬೈಲ್ ಸಂಖ್ಯೆ 9480805269ಗೆ ಕರೆಮಾಡಿ ತಿಳಿಸಲು ಕೋರಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ