ಬ್ರಹ್ಮಾವರ: ಗೋಡಂಬಿ ಕಾರ್ಖಾನೆಯಲ್ಲಿ 1.61 ಕೋಟಿ ರೂ. ಮೌಲ್ಯದ ಕೊಬ್ಬರಿ, ತೆಂಗಿನಕಾಯಿ ಗೋಲ್ಮಾಲ್; ಮೂವರ ವಿರುದ್ಧ ದೂರು
ಶಿರಿಯಾರ ಗ್ರಾಮದ ಕ್ಯಾಶ್ಯೂ ಕಾರ್ಖಾನೆಯಲ್ಲಿ 1.61 ಕೋಟಿ ರೂ. ಮೌಲ್ಯದ ತೆಂಗಿನಕಾಯಿ ಮತ್ತು ಕೊಬ್ಬರಿ ಅಕ್ರಮವಾಗಿ ಮಾರಾಟ ಮಾಡಿ ವಂಚಿಸಿರುವ ಬಗ್ಗೆ ಕೆಲಸಕ್ಕಿದ್ದ ರತೀಶ್ ಮತ್ತು ಆತನ ಸ್ನೇಹಿತರ ಮೇಲೆ ಆರೋಪ ಹೊರಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

