ಬ್ರಹ್ಮಾವರ, ಸೆಪ್ಟೆಂಬರ್ 15, 2025: ಬೈಕಾಡಿ ಗ್ರಾಮದ ದೂಪದಕಟ್ಟೆ ಎಂಬಲ್ಲಿ ದಿನಾಂಕ 14/09/2025 ರಂದು ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸದಾನಂದ ನಾಯ್ಕ ಅವರು ಮೇಲಾಧಿಕಾರಿಗಳ ಅನುಮತಿಯೊಂದಿಗೆ ಠಾಣಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಒಬ್ಬ ವ್ಯಕ್ತಿ ಓಡಿಹೋಗಿದ್ದು, ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವರು: 1) ಶರೀಫ್ ನಧಾಪ್ (36), 2) ರವಿ (30), 3) ಯಮನೂರ (45), 4) ಕಾಳಿಂಗಪ್ಪ (26), ಮತ್ತು 5) ಶರಣಪ್ಪ (37). ಜುಗಾರಿಗೆ ಬಳಸಿದ ರೂ. 1800/- ನಗದು, ಇಸ್ಪೀಟು ಎಲೆಗಳು, ಐದು ಮೊಬೈಲ್ ಫೋನ್‌ಗಳು, ಮತ್ತು KA-20-U-3253, KA-20-R-6349, KA-20-HE-4707, KA-20-EK-0891 ನಂಬರ್‌ನ ದ್ವಿಚಕ್ರ ವಾಹನಗಳನ್ನು ಪೊಲೀಸರು ಸ್ವಾಧೀನಕ್ಕೆ ಪಡೆದಿದ್ದಾರೆ.
ಈ ಘಟನೆಯ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 189/2025, ಕಲಂ 87 KP ACT ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.