ಬ್ರಹ್ಮಾವರ, ಸೆಪ್ಟೆಂಬರ್ 05, 2025: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರಾಡಿ ಗ್ರಾಮದ ರಶ್ಮಿ ಬಾರ್ ಆಂಡ್ ಲಾಡ್ಜ್ ಕಟ್ಟಡದ ಎರಡನೇ ಮಹಡಿಯ ರೂಮ್ ನಂ. 203ರಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರ ಆಡುತ್ತಿದ್ದ 11 ಜನರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಮಾಹಿತಿಯ ಮೇರೆಗೆ ದಾಳಿ ನಡೆಸಿದಾಗ ಆರೋಪಿಗಳು ಹಣವನ್ನು ಪಣವಾಗಿಟ್ಟು ಜುಗಾರ ಆಡುತ್ತಿರುವುದು ಕಂಡುಬಂದಿತು.

ಬಂಧಿತ ಆರೋಪಿಗಳು: ವಿಶ್ವನಾಥ ಪೂಜಾರಿ ಭಟ್ಕಳ (43), ಗಣೇಶ್ ಪೂಜಾರಿ (30), ಕೇಶವ (57), ಪ್ರಭಾಕರ ಶೆಟ್ಟಿ (49), ಜಯರಾಜ್ (40), ರಾಜು ಪೂಜಾರಿ (59), ರಾಜೀವ್ ಶೆಟ್ಟಿ (49), ರತ್ನಾಕರ (53), ಪ್ರಶಾಂತ್ (38), ಹರೀಶ್ ಮೋಗವೀರ (40), ಮತ್ತು ಲೋಹಿತ್ ಕುಪ್ಪಸ್ವಾಮಿ ಭೋವಿ (38).
ದಾಳಿಯ ವೇಳೆ ಪೊಲೀಸರು ₹21,080 ನಗದು ಮತ್ತು ಆರೋಪಿಗಳ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದ್ದು, ಜುಗಾರ ಆಡುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.