ಗಂಗೊಳ್ಳಿ: ಮೀನುಗಾರಿಕೆ ದೋಣಿಯಲ್ಲಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು
ಗಂಗೊಳ್ಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಗಾಳಿಯ ಹೊಡೆತಕ್ಕೆ ದೋಣಿಯೊಳಗೆ ಬಿದ್ದು ಎದೆನೋವಿನಿಂದ ಬಳಲುತ್ತಿದ್ದ ಜಗನ್ನಾಥ ಖಾರ್ವಿ (43) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

