ಗಂಗೊಳ್ಳಿ: ರಾಮಮಂದಿರ ಬಳಿ ದೈತ್ಯ ಹೆಬ್ಬಾವು ಪತ್ತೆ; ರಕ್ಷಣೆ
ಗಂಗೊಳ್ಳಿಯ ರಾಮಮಂದಿರ ಬಳಿಯ ವನಜ ಎಂಬುವವರ ಮನೆಗೆ ನುಗ್ಗಿದ ಬೃಹತ್ ಹೆಬ್ಬಾವನ್ನು ಉರಗ ತಜ್ಞರಾದ ಮಡಿ ನಾಗರಾಜ್ ಖಾರ್ವಿ ಮತ್ತು ಗಣೇಶ್ ಖಾರ್ವಿ ರಕ್ಷಿಸಿದ್ದಾರೆ. ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯರು ಕಾರ್ಯಾಚರಣೆಗೆ ಸಹಕರಿಸಿದರು.

