ಗಂಗೊಳ್ಳಿ, ಸೆಪ್ಟೆಂಬರ್ 19, 2025: ಕುಂದಾಪುರದ ಎಸ್‌ಬಿಐ ಎಟಿಎಂ ಬಳಿ ಸಿಕ್ಕಿದ ಚಿನ್ನದ ಸರವನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಗಂಗೊಳ್ಳಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಗಂಗಾಧರ್ ಪ್ರಾಮಾಣಿಕತೆಯ ಮಾದರಿಯಾಗಿದ್ದಾರೆ.
ಗಂಗಾಧರ್ ಅವರಿಗೆ ಕಂಡ ಚಿನ್ನದ ಸರದ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗಿ, ವಾರಸುದಾರರನ್ನು ಪತ್ತೆಹಚ್ಚಿ, ಗಂಗೊಳ್ಳಿ ಪಿಎಸ್‌ಐ ಪವನ್ ನಾಯಕ್ ಅವರ ಉಪಸ್ಥಿತಿಯಲ್ಲಿ ಕಳೆದುಕೊಂಡವರಿಗೆ ಸರವನ್ನು ಹಿಂದಿರುಗಿಸಿದ್ದಾರೆ. ಈ ಕಾರ್ಯವನ್ನು ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಶ್ಲಾಘಿಸಿದ್ದು, ಸಾರ್ವಜನಿಕ ವಲಯದಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.