ಗಂಗೊಳ್ಳಿ: ಇಸ್ಪೀಟು ಜುಗಾರಿ ಅಡ್ಡೆಯ ಮೇಲೆ ಪೊಲೀಸರ ದಾಳಿ; ಐವರ ಬಂಧನ, ನಗದು ವಶ
ಕೊಡಗುಂಜಿ ಸೇತುವೆ ಬಳಿ ಇಸ್ಪೀಟು ಜುಗಾರಿ ಆಡುತ್ತಿದ್ದ ರತ್ನಾಕರ ಕಾಂಚನ್ ಸೇರಿದಂತೆ ಐವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 13,020 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

