ಗಂಗೊಳ್ಳಿ: ಸರಸ್ವತಿ ಪಿಯು ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶ; ಗೌತಮಿ ನಾಯಕ್ ಕಾಲೇಜಿಗೆ ಪ್ರಥಮ
ಗಂಗೊಳ್ಳಿ ಸರಸ್ವತಿ ಪಿಯು ಕಾಲೇಜಿನ ಗೌತಮಿ ನಾಯಕ್ ಸೇರಿದಂತೆ ಐವರು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ರಾಜ್ಯ ಮಟ್ಟದ ಅಗ್ರ ಹತ್ತು ಸ್ಥಾನಗಳಲ್ಲಿ ಮಿಂಚಿದ್ದಾರೆ. ಕಾಲೇಜಿನ ಒಟ್ಟು 63 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 38 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

