ಹೇಮ್ಮಾಡಿ

ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೈನಿಕರಿಗೆ ಗೌರವಾರ್ಪಣೆ

ಹೆಮ್ಮಾಡಿ: 79ನೇ ಸ್ವಾತಂತ್ರ್ಯೋತ್ಸವದಲ್ಲಿ ಮೊಗವೀರ ಯುವ ಸಂಘಟನೆ ಮತ್ತು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಆಯೋಜನೆಯಲ್ಲಿ ನಿವೃತ್ತ ಯೋಧ ಮೋಹನ ದಾಸ ಶೆಟ್ಟಿಗೆ ಸನ್ಮಾನ. ದಿನೇಶ್ ಕಾಂಚನ್ ಅಧ್ಯಕ್ಷತೆ.

ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೈನಿಕರಿಗೆ ಗೌರವಾರ್ಪಣೆ

ಹೆಮ್ಮಾಡಿ, ಆಗಸ್ಟ್ 15, 2025: ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆಯ ಹೆಮ್ಮಾಡಿ ಘಟಕ ಮತ್ತು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಉಡುಪಿ, ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಅಂಗವಾಗಿ “ಸೈನಿಕರಿಗೊಂದು ಗೌರವಾರ್ಪಣೆ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ನಿವೃತ್ತ ಯೋಧ ಮೋಹನ ದಾಸ ಶೆಟ್ಟಿ ಮತ್ತು ಅವರ ಧರ್ಮಪತ್ನಿಯನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘಟನೆಯ ಹೆಮ್ಮಾಡಿ ಘಟಕದ ಅಧ್ಯಕ್ಷ ದಿನೇಶ್ ಕಾಂಚನ್ ಬಾಳಿಕೆರೆ ವಹಿಸಿದ್ದರು. ಹಿರಿಯರಾದ ಡಾ. ಅತುಲ್ ಕುಮಾರ್ ಶೆಟ್ಟಿ ಮಾತನಾಡಿ, ಸಂಘಟನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವಿರಾಜ ಶೆಟ್ಟಿ, ಹೆಮ್ಮಾಡಿ ಘಟಕದ ಗೌರವಾಧ್ಯಕ್ಷ ಲೋಹಿತಾಶ್ವ ಆರ್. ಕುಂದರ್, ಮಾಜಿ ಅಧ್ಯಕ್ಷ ರಾಘವೇಂದ್ರ ನೆಂಪು, ಚಿತ್ತೂರು ಪಂಚಾಯತ್ ಸದಸ್ಯರಾದ ಚಂದ್ರ ಶೆಟ್ಟಿ, ರಘುರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಹೆಮ್ಮಾಡಿ ಘಟಕದ ಕಾರ್ಯದರ್ಶಿ ಜಗದೀಶ ನೆಂಪು, ಕಟ್ ಬೆಲ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಪುತ್ರನ್, ಸ್ತ್ರೀಶಕ್ತಿ ಬಗ್ವಾಡಿ ಹೋಬಳಿ ಅಧ್ಯಕ್ಷೆ ಶ್ಯಾಮಲಾ ಜಿ. ಚಂದನ್, ಮೊಗವೀರ ಯುವ ಸಂಘಟನೆಯ ಪದಾಧಿಕಾರಿಗಳು, ಮತ್ತು ನೆಂಪು ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.

ಹೆಮ್ಮಾಡಿ ಘಟಕದ ಉಪಾಧ್ಯಕ್ಷ ಪ್ರವೀಣ್ ಮೊಗವೀರ ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿ, ವಂದನೆ ಸಲ್ಲಿಸಿದರು.

ಈ ಲೇಖನವನ್ನು ಹಂಚಿಕೊಳ್ಳಿ