ಹೆಮ್ಮಾಡಿ: ನಾಪತ್ತೆಯಾದ ಕಾಲೇಜು ವಿದ್ಯಾರ್ಥಿ ನಮೇಶ್ ಮೃತದೇಹ ಗಂಗೊಳ್ಳಿ ನದಿತೀರದಲ್ಲಿ ಪತ್ತೆ;

ಹೆಮ್ಮಾಡಿ: ಕಾಲೇಜು ವಿದ್ಯಾರ್ಥಿ ನಮೇಶ್ ಪೂಜಾರಿ (17) ನಾಪತ್ತೆಯ ನಂತರ ಗಂಗೊಳ್ಳಿ ದಾಕುಹಿತ್ಲು ನದಿತೀರದಲ್ಲಿ ಮೃತದೇಹ ಪತ್ತೆ. ಕನ್ನಡಕುದ್ರು ನದಿಯಲ್ಲಿ ಬೈಕ್, ಬ್ಯಾಗ್ ಬಿಟ್ಟು ನಾಪತ್ತೆ; ಅಗ್ನಿಶಾಮಕ ದಳ, ಈಜುಪಟು ದಿನೇಶ್ ಖಾರ್ವಿ ಹುಡುಕಾಟ. ಸಾವಿನ ಕಾರಣ ತನಿಖೆಯಲ್ಲಿದೆ.

ಹೆಮ್ಮಾಡಿ: ನಾಪತ್ತೆಯಾದ ಕಾಲೇಜು ವಿದ್ಯಾರ್ಥಿ ನಮೇಶ್ ಮೃತದೇಹ ಗಂಗೊಳ್ಳಿ ನದಿತೀರದಲ್ಲಿ ಪತ್ತೆ;

ಕುಂದಾಪುರ, ಸೆಪ್ಟೆಂಬರ್ 20, 2025: ಕಾಲೇಜಿನಿಂದ ಮನೆಗೆ ತೆರಳಬೇಕಿದ್ದ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯ ಮೃತದೇಹ ಗಂಗೊಳ್ಳಿ ದಾಕುಹಿತ್ಲು ನದಿ ತೀರದಲ್ಲಿ ಪತ್ತೆಯಾಗಿದೆ. ಹೆಮ್ಮಾಡಿ ಸಂತೋಷನಗರ ನಿವಾಸಿ ಲವೇಶ್ ಪೂಜಾರಿ ಇವರ ಪುತ್ರ, ಪ್ರಥಮ ಪಿಯುಸಿಯ ನಮೇಶ್ (17) ಮೃತ ವಿದ್ಯಾರ್ಥಿ.

ಗುರುವಾರ ಬೆಳಿಗ್ಗೆ ಕಾಲೇಜಿಗೆ ತೆರಳಿದ್ದು ನಮೇಶ್ ಸಂಜೆ ನಾಲ್ಕು ಗಂಟೆಯವರೆಗೂ ಕಾಲೇಜಿನಲ್ಲಿದ್ದು ಆನಂತರ ಮನೆಗೆಂದು ತೆರಳಿದ್ದಾನೆ. ಆದರೆ ಸಂಜೆಯಾದರೂ ಮನೆಗೆ ಬರದಿದ್ದಾಗ ಹುಡುಕಾಟ ನಡೆಸಿದ್ದಾರೆ. ಬೈಕ್‌ನಲ್ಲಿ ತೆರಳಿದ್ದ ನಮೇಶ್ ಕನ್ನಡಕುದ್ರು ನದಿ ತೀರದಲ್ಲಿ ಬೈಕ್ ಹಾಗೂ ತನ್ನ ಕಾಲೇಜು ಬ್ಯಾಗ್ ಬಿಟ್ಟು ನಾಪತ್ತೆಯಾಗಿದ್ದನು. ಗುರುವಾರ ಸಂಜೆ ಹಾಗೂ ಶುಕ್ರವಾರ ಕೂಡ ಹುಟುಕಾಟ ಮುಂದುವರೆಸಿದ್ದು, ಅಗ್ನಿಶಾಮಕ‌ದಳ, ಗಂಗೊಳ್ಳಿಯ ಈಜುಪಟು ದಿನೇಶ್ ಖಾರ್ವಿ ಹಾಗೂ ಸ್ಥಳೀಯರು ನದಿಯಲ್ಲಿ ಸಂಜೆಯ ತನಕವೂ ಹುಟುಕಾಟ ನಡೆಸಿದ್ದರು. ಶನಿವಾರ ಬೆಳಿಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಹುಡುಕಾಟ ನಡೆಸಿದಾಗ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.
ವಿದ್ಯಾರ್ಥಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ