ಹೊನ್ನಾವರ: ಕುತ್ತಿಗೆ ಮಟ್ಟದ ಮಳೆ ನೀರಿನಲ್ಲಿ ಶವ ಸಾಗಣೆ; ರಸ್ತೆ, ಸೇತುವೆ ಇಲ್ಲದೆ ದೊಡ್ಡಹಿತ್ತಲಕೇರಿ ಗ್ರಾಮಸ್ಥರ ನೋವಿನ ಬದುಕು
ಹೊನ್ನಾವರದ ದೊಡ್ಡಹಿತ್ತಲಕೇರಿಯಲ್ಲಿ ರಸ್ತೆ ಸೌಲಭ್ಯವಿಲ್ಲದೆ ಇತ್ತೀಚೆಗೆ ಕುತ್ತಿಗೆ ಮಟ್ಟದ ಪ್ರವಾಹದ ನೀರಿನಲ್ಲೇ ಶವಪೆಟ್ಟಿಗೆ ಹೊತ್ತು ಸಾಗಿಸಿದ ಕರುಣಾಜನಕ ಘಟನೆ ನಡೆದಿದೆ. ಭಾಸ್ಕೇರಿ ಹೊಳೆಗೆ ತಕ್ಷಣ ಕಾಲುಸಂಕ ನಿರ್ಮಿಸುವಂತೆ 50ಕ್ಕೂ ಹೆಚ್ಚು ಕುಟುಂಬಗಳು ಆಗ್ರಹಿಸಿವೆ.

