ಹೊನ್ನಾವರ: 12 ಗಂಟೆಗಳಲ್ಲಿ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು; ಇಬ್ಬರು ಆರೋಪಿಗಳ ಬಂಧನ
ಉಪ್ಪೋಣಿಯ ಗೋಡೌನ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಹೊನ್ನಾವರ ಪೊಲೀಸರು 12 ಗಂಟೆಗಳಲ್ಲಿ ಬಂಧಿಸಿದ್ದಾರೆ. ಅಬ್ದುಲ್ ವಾಜೀದ್ ಮತ್ತು ಅಪ್ತಾಬ್ ಬಂಧಿತ ಆರೋಪಿಗಳಾಗಿದ್ದು, ಅವರಿಂದ ಕದ್ದ ಮಾಲು ವಶಪಡಿಸಿಕೊಳ್ಳಲಾಗಿದೆ.

