ಕಾರ್ಕಳ: 43ನೇ ವಯಸ್ಸಿನಲ್ಲಿ ಪಿಯುಸಿ ಪಾಸ್; ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂದು ತೋರಿಸಿಕೊಟ್ಟ ರಿಕ್ಷಾ ಚಾಲಕ ಪ್ರಶಾಂತ್ ಪೂಜಾರಿ
ಕಾರ್ಕಳದ ರಿಕ್ಷಾ ಚಾಲಕ ಪ್ರಶಾಂತ್ ಪೂಜಾರಿ (43) ಅವರು ಛಲ ಬಿಡದೆ ಓದಿ ಪಿಯುಸಿ ಕಲಾ ವಿಭಾಗದಲ್ಲಿ 334 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಬಡತನದಿಂದ ಅರ್ಧಕ್ಕೇ ನಿಂತಿದ್ದ ಓದನ್ನು 43ನೇ ವಯಸ್ಸಿನಲ್ಲಿ ಮುಂದುವರಿಸಿ ಸಾಧನೆ ಮಾಡಿದ್ದಾರೆ.

