ಬೆಂಗಳೂರು: ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ; ಸರ್ಕಾರಿ ನೌಕರರಿಗೆ ಸತತ 3 ದಿನ ರಜೆ ಭಾಗ್ಯ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಮಾರ್ಪಾಡು
ಆರ್ಥಿಕ ವರ್ಷದ ಅಂತ್ಯದ ಹಿನ್ನೆಲೆಯಲ್ಲಿ ಮಹಾವೀರ ಜಯಂತಿ ರಜೆಯನ್ನು ಮಾರ್ಚ್ 31ರ ಬದಲಾಗಿ ಮಾರ್ಚ್ 30ಕ್ಕೆ ಬದಲಾಯಿಸಲಾಗಿದೆ. ಇದರಿಂದ ಸರ್ಕಾರಿ ನೌಕರರಿಗೆ ಸತತ 3 ದಿನ ರಜೆ ಸಿಗಲಿದ್ದು, ಮಾರ್ಚ್ 30ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ.

