ಕಾರವಾರ: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಣಕಾಸು ಅವ್ಯವಹಾರದ ಆರೋಪಿ ಪೊಲೀಸ್ ಬಲೆಗೆ
ಹಣಕಾಸು ಅವ್ಯವಹಾರ ನಡೆಸಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಂಕೋಲಾ ನಿವಾಸಿ ವಿಕ್ರಂ ಎನ್. ಪಂತ್‌ನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಹತ್ತು ಹಲವು ವಾರೆಂಟ್‌ಗಳಿದ್ದರೂ ಸಿಗದೆ ಓಡಾಡುತ್ತಿದ್ದ ಆರೋಪಿಯನ್ನು ಪೊಲೀಸ್ ಸಿಬ್ಬಂದಿ ಗುರು ನಾಯಕ ಅವರು ಪತ್ತೆಹಚ್ಚಿದ್ದಾರೆ.

