ಕುಂದಾಪುರ: ಕೋಡಿ ಬ್ಯಾರಿಸ್ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ; ವಿಜ್ಞಾನ ವಿಭಾಗದಲ್ಲಿ ತ್ರಿಶಾ ಕಾಲೇಜಿಗೆ ಪ್ರಥಮ
ಕೋಡಿ ಬ್ಯಾರಿಸ್ ಪಿಯು ಕಾಲೇಜು ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. 92 ವಿದ್ಯಾರ್ಥಿಗಳಲ್ಲಿ 16 ಮಂದಿ ವಿಶಿಷ್ಟ ಶ್ರೇಣಿ ಪಡೆದಿದ್ದು, ವಿಜ್ಞಾನದಲ್ಲಿ ತ್ರಿಶಾ (577) ಮತ್ತು ವಾಣಿಜ್ಯದಲ್ಲಿ ನಮಿಷ (570) ಕಾಲೇಜಿನ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.

