ಕೊಲ್ಲೂರು/ಕಾರ್ಕಳ, ಆಗಸ್ಟ್ 23, 2025: ಕೊಲ್ಲೂರು ಮತ್ತು ಕಾರ್ಕಳದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೋಮು ಸೌಹಾರ್ದಕ್ಕೆ ಭಂಗ ತರುವ ಪೋಸ್ಟ್‌ಗಳನ್ನು ಹಾಕಿದ ಆರೋಪದ ಮೇಲೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣೆಯ ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಸೆಲ್‌ನ ಸಿಬ್ಬಂದಿ ಸಂತೋಷ ಕುಲಾಲ, ಆಗಸ್ಟ್ 22, 2025ರ ಸಂಜೆ 7:00 ಗಂಟೆಗೆ ಫೇಸ್‌ಬುಕ್ ಪರಿಶೀಲನೆ ವೇಳೆ, ಜಗದೀಶ ಉಡುಪ ಎಂಬವರ ಖಾತೆಯಿಂದ ಪ್ರಚೋದನಕಾರಿ ಪೋಸ್ಟ್ ಪತ್ತೆಯಾಗಿದೆ. ಇದು ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡುವಂತಿದೆ ಎಂದು ಆರೋಪಿಸಿ, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/2025, ಕಲಂ 353(2) BNS 2023ರಡಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಂದರ, ಆಗಸ್ಟ್ 22, 2025ರ ಸಂಜೆ 5:00 ಗಂಟೆಗೆ ಸಾಮಾಜಿಕ ಮಾಧ್ಯಮ ಪರಿಶೀಲನೆ ವೇಳೆ, ಸುದೀಪ್ ಶೆಟ್ಟಿ (ನಿಟ್ಟೆ ಗ್ರಾಮ) ಎಂಬವರ ಫೇಸ್‌ಬುಕ್ ಪೇಜ್‌ನಲ್ಲಿ ಕೋಮುವಾದಿ ಪೋಸ್ಟ್ ಪತ್ತೆಯಾಗಿದೆ. ಇದು ಜಾತಿ, ಧರ್ಮಗಳ ನಡುವೆ ವೈಷಮ್ಯ ಮತ್ತು ವೈರತ್ವವನ್ನು ಉಂಟುಮಾಡುವಂತಿದೆ ಎಂದು ಆರೋಪಿಸಿ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 100/2025, ಕಲಂ 353(2) BNS 2023ರಡಿ ಪ್ರಕರಣ ದಾಖಲಾಗಿದೆ.