ಕೊಣಾಜೆ: ತಂದೆ ನಿಧನರಾದ ದಿನವೇ ಪರೀಕ್ಷೆ ಬರೆದಿದ್ದ ಫಾತಿಮಾ ಶಿಝಾ ಎಸ್‌ಎಸ್‌ಎಲ್‌ಸಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ

ತಂದೆ ನಿಧನರಾದ ದಿನವೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಕೊಣಾಜೆಯ ಫಾತಿಮಾ ಶಿಝಾ 589 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ದುಃಖದ ನಡುವೆಯೂ ಅವರು ತೋರಿದ ಧೈರ್ಯ ಮತ್ತು ಶೈಕ್ಷಣಿಕ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.