ಕುಂದಾಪುರ

ಬಸ್ಸು ಲಾರಿ ಮುಖಾಮುಖಿ, ವಿದ್ಯಾರ್ಥಿಗಳ ಸಹಿತ ಹಲವರಿಗೆ ಗಾಯ, 6 ಜನರು ಆಸ್ಪತ್ರೆಗೆ ದಾಖಲು

ಕುಂದಾಪುರ: ಆರಾಟೆ ಮುಳ್ಳಿಕಟ್ಟೆ ಸೇತುವೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್-ಟ್ರಕ್ ಢಿಕ್ಕಿ; ಹಲವಾರು ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಗಾಯ. ಆಪತ್ಬಾಂಧವ ಆಂಬುಲೆನ್ಸ್ ತಂಡ ಸಹಾಯ.

ಬಸ್ಸು ಲಾರಿ ಮುಖಾಮುಖಿ, ವಿದ್ಯಾರ್ಥಿಗಳ ಸಹಿತ ಹಲವರಿಗೆ ಗಾಯ, 6 ಜನರು ಆಸ್ಪತ್ರೆಗೆ ದಾಖಲು
ಆರಾಟೆ ಮುಳ್ಳಿಕಟ್ಟೆ ಸೇತುವೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್-ಟ್ರಕ್ ಢಿಕ್ಕಿ | Photo : MHI

ಕುಂದಾಪುರ, ಆಗಸ್ಟ್ 18, 2025: ಕುಂದಾಪುರ ಮತ್ತು ತ್ರಾಸಿ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಆರಾಟೆ ಮುಳ್ಳಿಕಟ್ಟೆ ಸೇತುವೆ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಢಿಕ್ಕಿಯಿಂದ ಹಲವಾರು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹೆದ್ದಾರಿಯಲ್ಲಿ ಹಲವು ಸಮಯ ಸಂಚಾರ ಅಸ್ತವ್ಯಸ್ತ ಗೊಂಡಿತು. ಸಾರ್ವಜನಿಕರು ಹಾಗೂ ಕೆಲ ಸ್ವಯಂಸೇವಕರು ಸಂಚಾರ ಸರಿಪಡಿಸಲು ಹರಸಾಹಸಪಟ್ಟರು.

ಆರಾಟೆ ಮುಳ್ಳಿಕಟ್ಟೆ ಸೇತುವೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್-ಟ್ರಕ್ ಢಿಕ್ಕಿ | Photo : MHI

ಘಟನೆಯ ಸ್ಥಳಕ್ಕೆ ಎಂಎಚ್ ಇಬ್ರಾಹಿಂ ಗಂಗೊಳ್ಳಿಯ 24×7 ಹೆಲ್ಪ್ ಲೈನ್ ಆಪತ್ಬಾಂಧವ ಆಂಬುಲೆನ್ಸ್ ತಂಡ ತಕ್ಷಣ ಆಗಮಿಸಿ ಗಾಯಗೊಂಡವರಿಗೆ ಸಹಾಯ ಮಾಡುತ್ತಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಹೆದ್ದಾರಿ ಪೊಲೀಸರು, 112 ಪೊಲೀಸರು, ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಮತ್ತು ಹೆದ್ದಾರಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ

ಇದು ಪ್ರಸ್ತುತ ನಡೆಯುತ್ತಿರುವ ಘಟನೆ, ನವೀಕರಣಗಳಿಗಾಗಿ ಗಮನವಿರಲಿ.

ಈ ಲೇಖನವನ್ನು ಹಂಚಿಕೊಳ್ಳಿ