ಕುಂದಾಪುರ, ಆಗಸ್ಟ್ 28, 2025: ಕರ್ನಾಟಕ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳು ಕುಂದಾಪುರ ತಾಲೂಕಿನಲ್ಲಿ ಯಶಸ್ವಿಯಾಗಿ ಜಾರಿಯಾಗುತ್ತಿವೆ. ಜುಲೈ 2025ರ ಅಂತ್ಯದ ವೇಳೆಗೆ ಗೃಹಲಕ್ಷ್ಮೀ ಯೋಜನೆಗೆ ₹7,04,26,000, ಗೃಹ ಜ್ಯೋತಿಗೆ ₹4,37,45,109, ಶಕ್ತಿ ಯೋಜನೆಗೆ ₹2,55,27,659, ಅನ್ನಭಾಗ್ಯಕ್ಕೆ ₹1,97,83,845 ಸೇರಿ ಒಟ್ಟು ₹15,94,82,613 ಬಿಡುಗಡೆಯಾಗಿದೆ. ತಾಲೂಕಿಗೆ ಒಟ್ಟಾರೆ ₹3,96,70,81,852 ಮೊತ್ತವನ್ನು ಯೋಜನೆಗಳಿಗಾಗಿ ಒದಗಿಸಲಾಗಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ತಿಳಿಸಿದರು.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆಪ್ಟೆಂಬರ್‌ನಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದೆಂದು ತಿಳಿಸಿದರು. ಹೊಸ ಸದಸ್ಯರ ಸೇರ್ಪಡೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಹೊಸ ಮನೆ ನಿರ್ಮಾಣಕ್ಕೆ ತಾತ್ಕಾಲಿಕ ವಿದ್ಯುತ್ ಪರವಾನಿಗೆಗೆ ಮೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು.ಇಕೆವೈಸಿ ಮತ್ತು ಆಧಾರ್ ಸೀಡಿಂಗ್ ಗೊಂದಲವನ್ನು ಸರಿಪಡಿಸುವಂತೆ ಮೆಸ್ಕಾಂಗೆ ಸೂಚಿಸಲಾಗಿದೆ.
ಗಂಗೊಳ್ಳಿಯಿಂದ ಬೈಂದೂರಿಗೆ ನೇರ ಕೆಎಸ್‌ಆರ್‌ಟಿಸಿ ಬಸ್ ಸಂಪರ್ಕ ಕಲ್ಪಿಸುವಂತೆ ಸಮಿತಿ ಸದಸ್ಯ ಝಹೀರ್ ಅಹ್ಮದ್ ನಾಖುದ ಮನವಿ ಮಾಡಿದರು. ಗಂಗೊಳ್ಳಿಯ ಎರಡು ವಿದ್ಯಾಸಂಸ್ಥೆಗಳಿಂದ ಈಗಾಗಲೇ ಈ ಬಗ್ಗೆ ಬೇಡಿಕೆ ಬಂದಿದೆ. ನಾಡ ಮತ್ತು ಬಡಾಕೆರೆ ಭಾಗದ ಬಸ್‌ಗಳಿಗೆ ತಾತ್ಕಾಲಿಕ ಪರವಾನಿಗೆ ವಿಳಂಬವಾಗಿದ್ದು, 15 ದಿನಗಳಲ್ಲಿ ಇದನ್ನು ಒದಗಿಸಲಾಗುವುದು ಎಂದು ಹರಿಪ್ರಸಾದ್ ಶೆಟ್ಟಿ ತಿಳಿಸಿದರು. ಮೈಸೂರು-ಕೊಲ್ಲೂರು-ಹುಣಸೂರು ಡಿಪೋ ಬಸ್‌ನ ಸೇವೆಯನ್ನು ಕೊಲ್ಲೂರಿಗೆ ವಿಸ್ತರಿಸುವ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹೊಸ ಮನೆ ನಿರ್ಮಾಣಕ್ಕೆ ತಾತ್ಕಾಲಿಕ ವಿದ್ಯುತ್ ಪರವಾನಿಗೆಗೆ ನೀಡುವಂತೆ ಹಾಗೂ ಗುಜ್ಜಾಡಿ ಗ್ರಾಮದ ಕಡಿಹಿತ್ಲಿನಲ್ಲಿ ಹೊಸ ಟ್ರಾನ್ಸ್ ಫಾರ್ಮರ್ ಬೇಡಿಕೆಯನ್ನು ಸಮಿತಿ ಸದಸ್ಯ ಝಹೀರ್ ಅಹ್ಮದ್ ನಾಖುದ ಮನವಿ ಮಾಡಿದರು. ವಿದ್ಯುತ್ ಬಿಲ್‌ಗಳನ್ನು ತಿಂಗಳ ಒಳಗೆ ನೀಡದಿದ್ದರೆ ಗೊಂದಲ ಉಂಟಾಗುವುದರಿಂದ ಗಮನಹರಿಸುವಂತೆ ಸದಸ್ಯ ಅರುಣ ಹಕ್ಲಾಡಿ ಸಲಹೆ ನೀಡಿದರು.

ವಿದ್ಯುತ್ ಬಿಲ್‌ಗಳನ್ನು ತಿಂಗಳ ಒಳಗೆ ನೀಡದಿದ್ದರೆ ಗೊಂದಲ ಉಂಟಾಗುವುದರಿಂದ ಗಮನಹರಿಸುವಂತೆ ಸದಸ್ಯ ಚಂದ್ರ ಕಾಂಚನ್ ಸಲಹೆ ನೀಡಿದರು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಕೆವೈಸಿ ಮತ್ತು ಆಧಾರ್ ಸೀಡಿಂಗ್ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಆರ್ಹ ಫಲಾನುಭವಿಗಳು ಹಣ ಪಡೆಯದಿದ್ದರೆ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಇಲಾಖೆಗೆ ಮಾಹಿತಿ ನೀಡಬೇಕು.
ವಯಸ್ಸಾದವರ ಬೆರಳಚ್ಚು ಸ್ವೀಕರಿಸಲಾಗದ ಸಮಸ್ಯೆ ಹಾಗೂ ವಯಸ್ಸಾದವರಿಗೆ ಅನಾರೋಗ್ಯದ ಕಾರಣ ಪದೇ ಪದೇ ಪಡಿತರ ಅಂಗಡಿಗೆ ಬೆರಳಚ್ಚಿಗೆ ಕರೆತಲು ಸಮಸ್ಯೆ ಮನೆಯವರಿಗೆ ಆಗುತ್ತಿದೆ ಈ ಸಮಸ್ಯೆಗೆ ಸರ್ಕಾರಕ್ಕೆ ಮನವಿ ನೀಡಿ ನಿಯಮ ರೂಪಿಸಲು ಸಮಿತಿ ಸದಸ್ಯ ಝಹೀರ್ ಅಹ್ಮದ್ ನಾಖುದ ಮನವಿ ಮಾಡಿದರು. ಎಪಿಎಲ್ ಕುಟುಂಬಗಳಿಗೆ ರಿಯಾಯತಿ ದರದಲ್ಲಿ ಅಕ್ಕಿ ಮತ್ತು ಹೊಸ ಪಡಿತರ ಚೀಟಿಗೆ ಅವಕಾಶ ಕಲ್ಪಿಸುವಂತೆ ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ವಸುಂಧರ ಹೆಗ್ಡೆ, ಚಂದ್ರ ಕಾಂಚನ್, ಅಬಿಜಿತ್ ಪೂಜಾರಿ, ವಾಣಿ ಆರ್. ಶೆಟ್ಟಿ, ಆಶಾ ಕರ್ವಾಲ್ಲೋ, ನಾರಾಯಣ ಆಚಾರ್, ಗಣೇಶ, ಸವಿತಾ ಪೂಜಾರಿ, ಮಂಜು ಕೊಠಾರಿ, ಝಹೀರ್ ಅಹ್ಮದ್ ನಾಖುದ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ವ್ಯವಸ್ಥಾಪಕ ರಾಮಚಂದ್ರ ಮಯ್ಯ ವಂದನೆ ಸಲ್ಲಿಸಿದರು.