ಕುಂದಾಪುರ: ವಿಶ್ವಶಾಂತಿಗಾಗಿ ರಾಮಾಂಜಿ ನಮ್ಮಭೂಮಿ ಅವರಿಂದ ಏಕಾಂಗಿ ಮೌನ ಪ್ರತಿಭಟನೆ
ವಿಶ್ವದಲ್ಲಿ ಶಾಂತಿ ನೆಲೆಸಬೇಕು ಮತ್ತು ಯುದ್ಧದಿಂದ ಮಕ್ಕಳ ಮೇಲಾಗುತ್ತಿರುವ ಹಾನಿ ತಪ್ಪಬೇಕು ಎಂದು ಆಗ್ರಹಿಸಿ ರಾಮಾಂಜಿ ನಮ್ಮಭೂಮಿ ಅವರು ಕುಂದಾಪುರದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಭೇಟಿ ನೀಡಿ ಬೆಂಬಲ ಸೂಚಿಸಿದರು.

