ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲು: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ
ಲೋಕಸಭಾ ಸ್ಥಾನಗಳನ್ನು 850 ಕ್ಕೆ ಹೆಚ್ಚಿಸುವ 131ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯ ಬಹುಮತ ಸಿಗದ ಕಾರಣ ಲೋಕಸಭೆಯಲ್ಲಿ ಸೋಲುಂಟಾಗಿದೆ. ಇದರ ಪರಿಣಾಮವಾಗಿ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಹಿಂಪಡೆದಿದ್ದು, ದಕ್ಷಿಣದ ರಾಜ್ಯಗಳ ವಿರೋಧಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ.
