ಮಲ್ಪೆ ಬಂದರಿನಲ್ಲಿ ಕಾರ್ಮಿಕನ ಮೇಲೆ ಹಲ್ಲೆ: ಸಹಬಾಳ್ವೆ ಮತ್ತು ಸಿಐಟಿಯು ಸಂಘಟನೆಗಳಿಂದ ತೀವ್ರ ಖಂಡನೆ; ಆರೋಪಿಯ ಬಂಧನಕ್ಕೆ ಆಗ್ರಹ
ಮಲ್ಪೆ ಬಂದರಿನಲ್ಲಿ ಶೇಖ್ ಅಯ್ಯುಬ್ ಮೇಲೆ ನಡೆದ ಹಲ್ಲೆಯನ್ನು ಸಹಬಾಳ್ವೆ ಮತ್ತು ಸಿಐಟಿಯು ಸಂಘಟನೆಗಳು ಖಂಡಿಸಿವೆ. ಬಡ ಕಾರ್ಮಿಕರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ತಡೆಯಲು ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿವೆ.

