ಮಂಗಳೂರು: ಯುದ್ಧದ ಭೀತಿ ನಡುವೆ ಎಲ್‌ಪಿಜಿ ಹೊತ್ತು ತಂದ 'ಅಪೊಲೋ ಓಶಿಯನ್' ನೌಕೆ ನವಮಂಗಳೂರು ಬಂದರಿಗೆ ಆಗಮನ
ಮಧ್ಯಪ್ರಾಚ್ಯದ ಯುದ್ಧದ ಭೀತಿಯ ನಡುವೆ 16,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ಅಪೊಲೋ ಓಶಿಯನ್’ ಹಡಗು ಮಂಗಳೂರು ಬಂದರಿಗೆ ಬಂದಿಳಿದಿದೆ. ಕತಾರ್‌ನಿಂದ ಗುಜರಾತ್ ತಲುಪಿದ್ದ ಅನಿಲದ ಪೈಕಿ ಅರ್ಧ ಭಾಗವನ್ನು ಈ ನೌಕೆಯ ಮೂಲಕ ಮಂಗಳೂರಿಗೆ ತರಲಾಗಿದೆ.
