ನಿಟ್ಟೆ ಅಪಘಾತ: ತಂದೆಯ ಬೆನ್ನಲ್ಲೇ ಚಿಕಿತ್ಸೆ ಫಲಿಸದೆ ಮಗಳು ಪ್ರೇರಣಾ ಸಾವು; ಶೋಕಸಾಗರದಲ್ಲಿ ಕುಟುಂಬ
ನಿಟ್ಟೆಯಲ್ಲಿ ಕಾರ್ ಡಿಕ್ಕಿಯಾಗಿ ಗಾಯಗೊಂಡಿದ್ದ ಪ್ರೇರಣಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸಿಇಟಿ ಪರೀಕ್ಷೆ ಮುಗಿಸಿ ತಂದೆಯೊಂದಿಗೆ ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿತ್ತು. ಘಟನೆಯಲ್ಲಿ ತಂದೆ ನವೀನ್‌ಚಂದ್ರ ಅವರೂ ಸಾವನ್ನಪ್ಪಿದ್ದು, ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

