ಗಂಗೊಳ್ಳಿ: ಸತೀಶ್ ಖಾರ್ವಿಯವರ ಕ್ರೀಡಾ ಸಾಧನೆಗೆ ಕೊಂಕಣಿ ಖಾರ್ವಿ ಸಮಾಜದಿಂದ ಗೌರವ

ತ್ರಾಸಿಯ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜ ಭವನದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿಯವರನ್ನು ಖಾರ್ವಿ ಸಮಾಜ ಗೌರವಿಸಿತು. ಸೌತ್ ಆಫ್ರಿಕಾದಲ್ಲಿ ನಡೆಯುವ ವಿಶ್ವ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅವರಿಗೆ ಶುಭ ಕೋರಿದರು.

ಗಂಗೊಳ್ಳಿ: ಸತೀಶ್ ಖಾರ್ವಿಯವರ ಕ್ರೀಡಾ ಸಾಧನೆಗೆ ಕೊಂಕಣಿ ಖಾರ್ವಿ ಸಮಾಜದಿಂದ ಗೌರವ

ಗಂಗೊಳ್ಳಿ, ಸೆಪ್ಟೆಂಬರ್ 05, 2025: ತ್ರಾಸಿಯ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜ ಭವನದ ಕಚೇರಿಯಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿಯವರ ಕ್ರೀಡಾ ಸಾಧನೆಯನ್ನು ಗುರುತಿಸಿ ಖಾರ್ವಿ ಸಮಾಜದ ಬಾಂಧವರು ಗೌರವಿಸಿ ಅಭಿನಂದಿಸಿದರು.

ಅಕ್ಟೋಬರ್ 2025ರಲ್ಲಿ ಸೌತ್ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಮಾಸ್ಟರ್ ವಿಶ್ವ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸತೀಶ್ ಖಾರ್ವಿ ಆಯ್ಕೆಯಾಗಿದ್ದಾರೆ. ಈ ಸಾಧನೆಗಾಗಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಪರವಾಗಿ ಅವರಿಗೆ ಶುಭಕೋರಿ ಆಶೀರ್ವಾದ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹಾಸಭಾದ ಅಧ್ಯಕ್ಷ ರವಿ ಟಿ. ನಾಯ್ಕ, ಪ್ರಧಾನ ಕಾರ್ಯದರ್ಶಿ ಪಿತಂಬರ್ ಸದಾನಂದ ಖಾರ್ವಿ, ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಲೇಖನವನ್ನು ಹಂಚಿಕೊಳ್ಳಿ