ಬೆಂಗಳೂರು, ಸೆಪ್ಟೆಂಬರ್ 19, 2025: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 20, 2025ರಿಂದ ಅಕ್ಟೋಬರ್ 7, 2025ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರವು ಶಿಕ್ಷಣ ಇಲಾಖೆಯ ಮೂಲಕ ಆದೇಶ ಹೊರಡಿಸಿದೆ.
2025-26ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯು ರಜೆಗಳು ಮತ್ತು ಶಾಲಾ ಚಟುವಟಿಕೆಗಳ ಸಂಪೂರ್ಣ ಮಾರ್ಗದರ್ಶಿಯನ್ನು ಈಗಾಗಲೇ ಪ್ರಕಟಿಸಿದ್ದು, ಈ ಮಾರ್ಗದರ್ಶಿಯ ಪ್ರಕಾರ 18 ದಿನಗಳ ದಸರಾ ರಜೆಯನ್ನು ನೀಡಲಾಗಿದೆ. ರಜೆಯ ಬಳಿಕ ಅಕ್ಟೋಬರ್ 8, 2025ರಿಂದ ಶಾಲೆಗಳ ಎರಡನೇ ಅವಧಿಯ ತರಗತಿಗಳು ಆರಂಭವಾಗಲಿದ್ದು, ಈ ಅವಧಿಯು ಏಪ್ರಿಲ್ 10, 2026ರವರೆಗೆ ಮುಂದುವರಿಯಲಿದೆ.