ಇತಿಹಾಸ ಸೃಷ್ಟಿಸಿದ ಶಾಂತಾರಾಮ ಸಿದ್ದಿ: ವಿಧಾನಪರಿಷತ್ ಸಭಾಪತಿಯಾಗಿ ಸದನ ನಡೆಸಿದ ಮೊದಲ ಬುಡಕಟ್ಟು ಸದಸ್ಯ
ಯಲ್ಲಾಪುರದ ಶಾಂತಾರಾಮ ಸಿದ್ದಿ ಅವರು ವಿಧಾನಪರಿಷತ್ ಸಭಾಪತಿ ಪೀಠ ಅಲಂಕರಿಸುವ ಮೂಲಕ ಈ ಗೌರವ ಪಡೆದ ಮೊದಲ ಬುಡಕಟ್ಟು ಸದಸ್ಯ ಎಂಬ ಇತಿಹಾಸ ಬರೆದಿದ್ದಾರೆ. ಕುಗ್ರಾಮದ ಕೃಷಿಕನೊಬ್ಬ ಸದನ ಮುನ್ನಡೆಸಿದ್ದು ಸಂವಿಧಾನದ ಶಕ್ತಿಗೆ ಸಾಕ್ಷಿಯಾಗಿದೆ.

