ಭಟ್ಕಳ: ಶಮ್ಸ್ ಕಾಲೇಜಿನಲ್ಲಿ ಎಸ್‌ಐಒ ವತಿಯಿಂದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ
ಭಟ್ಕಳ ಎಸ್‌ಐಒ ವತಿಯಿಂದ ಶಮ್ಸ್ ಕಾಲೇಜಿನಲ್ಲಿ 10 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ವೈದ್ಯಕೀಯ, ತಂತ್ರಜ್ಞಾನ ಮತ್ತು ಮಾನವಿಕ ವಿಷಯಗಳ ತಜ್ಞರು ವಿದ್ಯಾರ್ಥಿಗಳ ವೈಯಕ್ತಿಕ ಗೊಂದಲಗಳಿಗೆ ಪರಿಹಾರ ನೀಡಿ ಭವಿಷ್ಯದ ಹಾದಿಯ ಬಗ್ಗೆ ಮಾರ್ಗದರ್ಶನ ನೀಡಿದರು.

