ಮಲ್ಪೆ: ಎಸ್‌ಐಒ ವತಿಯಿಂದ ವಿದ್ಯಾರ್ಥಿಗಳಿಗಾಗಿ ‘ಬೇಸಿಗೆ ವಸತಿ ಶಿಬಿರ 2026’
ಮಲ್ಪೆಯ ಎಸ್‌ಐಒ ಮತ್ತು ಜೆಎಸಿ ವತಿಯಿಂದ ಬೈಲಕೆರೆಯಲ್ಲಿ ಮೂರು ದಿನಗಳ ಬೇಸಿಗೆ ವಸತಿ ಶಿಬಿರ ನಡೆಯಿತು. ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಶಿಬಿರದಲ್ಲಿ ಧಾರ್ಮಿಕ ಬೋಧನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಲಾಯಿತು.

