ಉಡುಪಿ: ಕೇಂದ್ರದ ಹೊಸ ಕಾರ್ಮಿಕ ಸಂಹಿತೆ ಜಾರಿ ವಿರೋಧಿಸಿ ಸಿಐಟಿಯು ಅಡಿ ಕಾರ್ಮಿಕರಿಂದ ಜಿಲ್ಲಾದ್ಯಂತ 'ಕಪ್ಪು ದಿನ' ಆಚರಣೆ
ಕೇಂದ್ರದ ಹೊಸ ಕಾರ್ಮಿಕ ಸಂಹಿತೆ ಜಾರಿ ವಿರೋಧಿಸಿ ಉಡುಪಿ, ಬ್ರಹ್ಮವರ ಮತ್ತು ಕಾರ್ಕಳದಲ್ಲಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಕಪ್ಪು ದಿನ ಆಚರಿಸಿದರು. ಕೆಲಸದ ಅವಧಿ ಹೆಚ್ಚಳ ಮತ್ತು ಕಾರ್ಮಿಕ ಸಂಘಗಳ ಹಕ್ಕು ಕಸಿದುಕೊಳ್ಳುವ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

