ಉಡುಪಿ: ವಾಣಿಜ್ಯ ಅನಿಲ ಅಭಾವ; ಕ್ಯಾಟರಿಂಗ್ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ
ಉಡುಪಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಕೊರತೆಯಿಂದಾಗಿ ಕ್ಯಾಟರಿಂಗ್ ಉದ್ದಿಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ, ಆದ್ಯತೆಯ ಮೇರೆಗೆ ಅನಿಲ ಪೂರೈಕೆ ಮಾಡುವಂತೆ ಕ್ಯಾಟರಿಂಗ್ ಮಾಲೀಕರ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

