ಉಡುಪಿ, ಆಗಸ್ಟ್ 23, 2025: ಉಡುಪಿ ಜಿಲ್ಲಾ ಪೊಲೀಸ್ ಘಟಕವು ಸೆಪ್ಟೆಂಬರ್ 2025ರಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿಎಆರ್ ಉಡುಪಿ ಹಾಗೂ ತಾಲೂಕು ಕೇಂದ್ರಗಳಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರ (Civilian Rifle Training Course) ಆಯೋಜಿಸಲು ಉದ್ದೇಶಿಸಿದೆ. ಈ ತರಬೇತಿಯು ಆಯುಧ ಪರವಾನಗಿ ಪಡೆಯಲು ಕಡ್ಡಾಯವಾಗಿದ್ದು, ಆಸಕ್ತ ನಾಗರಿಕರು ಮತ್ತು ಈಗಾಗಲೇ ಆಯುಧ ಪರವಾನಗಿ ಹೊಂದಿರುವವರು ಈ ಶಿಬಿರದಲ್ಲಿ ಭಾಗವಹಿಸಬಹುದು.
ಅರ್ಜಿ ಸಲ್ಲಿಕೆ ವಿವರ:
- ಅರ್ಜಿ ಪಡೆಯುವ ಸ್ಥಳ: ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಡಿಎಆರ್ ಪೊಲೀಸ್ ಕೇಂದ್ರಸ್ಥಾನ, ಉಡುಪಿ.
- ಅರ್ಜಿ ಸಲ್ಲಿಕೆ: ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಸಂಬಂಧಿತ ಪೊಲೀಸ್ ಠಾಣೆ ಅಥವಾ ಡಿಎಆರ್ ಕೇಂದ್ರಸ್ಥಾನಕ್ಕೆ ಕೂಡಲೇ ಹಿಂದಿರುಗಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ:
- ಪೊಲೀಸ್ ಉಪಾಧೀಕ್ಷಕರು (ಸಶಸ್ತ್ರ), ಉಡುಪಿ: 9480805406
- ಪೊಲೀಸ್ ನಿರೀಕ್ಷಕರು (ಸಶಸ್ತ್ರ), ಉಡುಪಿ: 9480805464
- ಪೊಲೀಸ್ ಆರ್ಮರರ್: 9448946930