ಉಡುಪಿ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: ಶೇ. 96.1 ರಷ್ಟು ಪ್ರಗತಿ ಸಾಧನೆ
ಉಡುಪಿ ಜಿಲ್ಲೆಯಾದ್ಯಂತ ನಡೆದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದಲ್ಲಿ 62,835 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ. 96.1 ರಷ್ಟು ಸಾಧನೆ ಮಾಡಲಾಗಿದೆ. ಹಿರಿಯಡಕ, ಉದ್ಯಾವರ, ಶಿರ್ವ ಹಾಗೂ ಪಾಂಬೂರು ಪಡುಬೆಳ್ಳೆ ಕೇಂದ್ರಗಳಲ್ಲಿ ಜನಪ್ರತಿನಿಧಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು.

