ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ 7,40,582 ಗಣತಿ ನಮೂನೆ ವಿತರಣೆ
ಉಡುಪಿ ಜಿಲ್ಲೆಯಲ್ಲಿ ಎಸ್‌ಐಆರ್-2026 ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಶೇ.70 ರಷ್ಟು ಪ್ರಗತಿ ಸಾಧಿಸಿದ್ದು, ಈವರೆಗೆ 7,40,582 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಮನೆ ಭೇಟಿ ವೇಳೆ 282 ಮೃತ ಹಾಗೂ 154 ವರ್ಗಾವಣೆಗೊಂಡ ಮತದಾರರು ಪತ್ತೆಯಾಗಿದ್ದಾರೆ.

