ಉಡುಪಿ ಜಿಲ್ಲೆಯಲ್ಲಿ ಶೇ.89.5 ರಷ್ಟು ಗಣತಿ ನಮೂನೆ ವಿತರಣೆ

ಉಡುಪಿ ಜಿಲ್ಲೆಯಲ್ಲಿ ಎಸ್‌ಐಆರ್-2026 ಪ್ರಕ್ರಿಯೆಯಡಿ ಶೇ.89.5 ರಷ್ಟು ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಮನೆ ಮನೆ ಭೇಟಿ ಕಾರ್ಯದಲ್ಲಿ ನಿರತರಾಗಿರುವ 1,112 ಬಿಎಲ್‌ಒಗಳಿಗೆ ತಲಾ 8,000 ರೂ.ಗಳಂತೆ ಒಟ್ಟು 88.96 ಲಕ್ಷ ರೂ. ಗೌರವಧನ ಬಿಡುಗಡೆಯಾಗಿದೆ ಎಂದು ಡಿಸಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.