ಉಡುಪಿ: ಗ್ಯಾಸ್ ಬಿಲ್ ಅಪ್‌ಡೇಟ್ ಹೆಸರಲ್ಲಿ ಸೈಬರ್ ವಂಚನೆ; 1.45 ಲಕ್ಷ ರೂ. ದೋಚಿದ ಕಿರಾತಕರು
ಮುಂಬೈನ ಗ್ಯಾಸ್ ಏಜೆನ್ಸಿ ಹೆಸರಲ್ಲಿ ಕರೆ ಮಾಡಿದ ವಂಚಕರು, ಉಡುಪಿಯ ದಂಪತಿಯಿಂದ ಆಪ್ ಡೌನ್‌ಲೋಡ್ ಮಾಡಿಸಿ ಅವರ ಖಾತೆಯಲ್ಲಿದ್ದ 1.45 ಲಕ್ಷ ರೂ.ಗಳನ್ನು ಲೂಟಿ ಮಾಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

