ಉಡುಪಿ ಹೆದ್ದಾರಿಗಳಲ್ಲಿ ರೇಡಾರ್ ಕ್ಯಾಮೆರಾ ಕಣ್ಣು; ದಂಡದ ವಿವರ ಇಲ್ಲಿದೆ
ಉಡುಪಿ ಜಿಲ್ಲೆಯ ಹೆದ್ದಾರಿಗಳಲ್ಲಿ ರೇಡಾರ್ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ನಿಯಮ ಮೀರಿದ ಲಘು ವಾಹನಗಳಿಗೆ ₹1,000 ಹಾಗೂ ಭಾರಿ ವಾಹನಗಳಿಗೆ ₹2,000 ದಂಡ ವಿಧಿಸಲಾಗುತ್ತಿದ್ದು, ದೈನಂದಿನ ವೇಗ ಉಲ್ಲಂಘನೆ ಪ್ರಕರಣಗಳು 1,600 ಕ್ಕೆ ಕುಸಿದಿವೆ.

