ಉಡುಪಿ: ಕಲ್ಸಂಕದ ಮಾಲ್‌ನಲ್ಲಿರುವ ಫ್ಯಾನ್ಸಿ ಅಂಗಡಿಗೆ 13.39 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

ಉಡುಪಿ ಕಲ್ಸಂಕದ ಟೈಮ್ ಸ್ಕ್ವೇರ್ ಮಾಲ್‌ನ ಮಾರ್ಕೆಟ್ 99 ಮಳಿಗೆಯಲ್ಲಿ 13.39 ಲಕ್ಷ ರೂ. ನಗದು ದುರುಪಯೋಗಪಡಿಸಿಕೊಂಡ ಸಹಾಯಕ ಸ್ಟೋರ್ ಮ್ಯಾನೇಜರ್ ನಜೀರ್ ಖಾನ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.