ಉಡುಪಿ: ಮಲ್ಪೆಯಲ್ಲಿ ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಮೇಲೆ ಹಲ್ಲೆ – ಅಪ್ರಾಪ್ತ ಸೇರಿ 5 ಮಂದಿ ಬಂಧನ
ಮಲ್ಪೆಯ ಬ್ಲೂ ವೇವ್ಸ್ ಗೆಸ್ಟ್ ಹೌಸ್ ಬಳಿ ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಅಪ್ರಾಪ್ತ ಸೇರಿ 5 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು ಚಾಕು ಬಳಸಿ ಹಲ್ಲೆ ನಡೆಸಿದ್ದು, ಮಂಜುನಾಥ್ ಸಾಲಿಯಾನ್ ಅವರಿಗೆ ಗಂಭೀರ ಗಾಯಗಳಾಗಿವೆ. ಮಲ್ಪೆ ಪೊಲೀಸ್ ತನಿಖೆ ಮುಂದುವರಿದಿದೆ.

