ಮಲ್ಪೆ, ಸೆಪ್ಟೆಂಬರ್ 15, 2025: ಉಡುಪಿ ತಾಲೂಕಿನ ಕಡೆಕಾರು ಗ್ರಾಮದ ಕಿನ್ನಿಮೂಲ್ಕಿಯ ಅಬ್ಕೊ ಸ್ಟೀಲ್ ಅಂಗಡಿ ಎದುರು ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ದಿನಾಂಕ 13/09/2025 ರಂದು ಬೆಳಿಗ್ಗೆ 11:00 ಗಂಟೆಗೆ ದೇವರಾಜ ಎ ಎಮ್ (33) ಎಂಬ ವ್ಯಕ್ತಿ ಲೋ ಬಿಪಿ ಮತ್ತು ಲೋ ಶುಗರ್ ಆರೋಗ್ಯ ಸಮಸ್ಯೆಯಿಂದ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ.
ಪಿರ್ಯಾದಿದಾರರಾದ ರತ್ನ (50), ಹಾಸನ ಜಿಲ್ಲೆಯವರ ಎರಡನೇ ಮಗನಾದ ದೇವರಾಜ ಎ ಎಮ್, ಈ ಹಿಂದೆ ಶಿವಮೊಗ್ಗದಲ್ಲಿ ಬೇಕರಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ಉಡುಪಿಯಲ್ಲಿ ಹೋಮ್ ನರ್ಸಿಂಗ್ ಕೆಲಸದಲ್ಲಿ ತೊಡಗಿದ್ದರು. ಕುಸಿದು ಬಿದ್ದ ಅವರನ್ನು ಸಮಾಜಸೇವಕ ವಿಶು ಶೆಟ್ಟಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದರು. ಆದರೆ, ಚಿಕಿತ್ಸೆಯಲ್ಲಿರುವಾಗ ದಿನಾಂಕ 14/09/2025 ರಂದು ಮಧ್ಯರಾತ್ರಿ 00:51 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ದೇವರಾಜ ಎ ಎಮ್ ಮೃತಪಟ್ಟಿದ್ದಾರೆ.
ಈ ಘಟನೆಯ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 62/2025, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.